?ಚಾರ್‌ಮಿನಾರ್ಗೆ ಹಿನ್ನಲೆ ಸಂಗೀತ
Posted date: 21 Wed, Nov 2012 ? 03:23:57 PM

 ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಚಾರ್‌ಮಿನಾರ್ ಚಿತ್ರಕ್ಕೆ ಗುರುಕಿರಣ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ಹರಿ ಸಂಗೀತ ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅಳವಡಿಸುತ್ತಿದ್ದಾರೆ.
    ‘ತಾಜ್‌ಮಹಲ್, ‘ಪ್ರೇಮ್‌ಕಹಾನಿ, ‘ಮೈಲಾರಿ ಚಿತ್ರಗಳ ನಂತರ ಆರ್.ಚಂದ್ರು ‘ಚಾರ್‌ಮಿನಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಆರ್.ಚಂದ್ರು ಈ ಚಿತ್ರದ ನಿರ್ಮಾಪಕರು ಹೌದು.
     ಕೆ.ಎಸ್.ಚಂದ್ರಶೇಖರ್ ಈ ಚಿತ್ರಕ್ಕೆ ಥ್ರಿಲ್ಲರ್‌ಮಂಜು ಅವರ ಸಾಹಸ ನಿರ್ದೇಶನವಿದೆ. ಇಮ್ರಾನ್, ಹರ್ಷ, ರಘು ನೃತ್ಯ ನಿರ್ದೇಶನವಿರುವ  ‘ಚಾರ್‌ಮಿನಾರ್  ಚಿತ್ರದ ನಾಯಕರಾಗಿ ಲವ್ಲಿಸ್ಟಾರ್ ಪ್ರೇಮ್ ಅಭಿನಯಿಸುತ್ತಿದ್ದಾರೆ. ಮೇಘನಾ, ಕುಮುದ ನಾಯಕಿಯರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ಸುಧಾ ಬೆಳವಾಡಿ, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed